UDUPI JNANASUDHA INSTITUTIONS
MANIPAL JNANASUDHA INSTITUTIONS
Home
About Us
Achievements
Management
Job Opportunities
Contact Us
ಕಾರ್ಕಳ ಜ್ಞಾನಸುಧಾ : ಜ್ಞಾನಸಂಭ್ರಮ ಕರ್ನಾಟಕದ ಮುಕುಟ ಮಣಿ ಜ್ಞಾನಸುಧಾ : ಬಿ.ಶೇಖರ್
ಕಾರ್ಕಳ ; ಸಾಮಾಜಿಕ ಜಾಲತಾಣದಿಂದ ನಮ್ಮ ಕೌಟುಂಬಿಕ ಸಂಬAಧಗಳು ಇಂದು ಬಿರುಕು ಬಿಟ್ಟಿವೆ. ಹದಿಹರೆಯ, ವ್ಯಕ್ತಿತ್ವ ರೂಪಿಸುವ ಸಂಕ್ರಮಣ ಕಾಲ. ಇಂತಹ ಸಂದರ್ಭದಲ್ಲೆ ಜೀವನ ಮೌಲ್ಯಗಳನ್ನು ಬಿತ್ತುವ ‘ಮೌಲ್ಯಸುಧಾ’ದ ಮೂಲಕ ಕೌಟುಂಬಿಕ, ಬದುಕಿನ ಪ್ರೀತಿಯನ್ನು ತುಂಬುತ್ತಿರುವ ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ, ವಿಭಿನ್ನ ರೀತಿಯಲ್ಲಿ ಶಿಕ್ಷಣದ ಪರಂಪರೆಗೆ ಕೊಡುಗೆ ನೀಡುತ್ತಿರುವ ಕಾರ್ಕಳದ ಹೆಮ್ಮೆ ಜ್ಞಾನಸುಧಾವಾಗಿದೆ ಎಂದು ತರಂಗ ವಾರಪತ್ರಿಕೆಯ ಸಂಪಾದಕಿ ಡಾ.ಯು.ಬಿ. ರಾಜಲಕ್ಷಿö್ಮ ನುಡಿದರು.

ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ-೨೦೨೪ರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀ ಬಿ. ಶೇಖರ್ ಶೆಟ್ಟಿಯವರು ಮಾತನಾಡಿ, ವ ಕಾರಗಳಾದ ವಟು, ವಸನ, ವಿದ್ಯೆ, ವಿನಯ ಮತ್ತು ವಾಕ್ ವಿ ಕಾರವಾಗದೆ ಸಾಕಾರಾವಾದರೆ ಶ್ರೇಷ್ಟ ವ್ಯಕ್ತಿಗಳಾಗಲು ಸಾಧ್ಯ. ಯೋಜನೆ ಮತ್ತು ಸ್ವಯಂ ಮೌಲ್ಯಮಾಪನ ನಮ್ಮಲ್ಲಿರ ಬೇಕು. ಯಾರು ರಾತ್ರಿ ಮಲಗುವಾಗ, ಬೆಳಗ್ಗೆ ಏಳುವಾಗ ನಗು ಮುಖದಲ್ಲಿ ಇರುತ್ತಾರೋ ಅವರೇ ಸುಖಿಗಳು. ಹಾಗಿದ್ದಾಗಲೇ ಜೀವನ ಸಾರ್ಥಕ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು, ಸಂಸ್ಥೆ ನಡೆಸಲು ಹುದ್ದೆ ಮುಖ್ಯವಲ್ಲ. ಮನಸು ಮುಖ್ಯ. ಸಂಖ್ಯೆ ಮುಖ್ಯವಲ್ಲ ಸಂಕಲ್ಪ ಮುಖ್ಯ. ಅಂತಹ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದ ಸೇವೆಯಿಂದ ಧನ್ಯನಾಗಿದ್ದೇನೆ. ವಿದ್ಯಾರ್ಥಿಗಳು ಇಲ್ಲಿ ಆಗಮಿಸಿದ ಮುಖ್ಯ ಅತಿಥಿಗಳ ಸಂದೇಶವನ್ನು ಕೇಳಿ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಕಾರ್ಯ ಸಾರ್ಥಕ ಎಂದರು.


ಗೌರವ ಸನ್ಮಾನ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ರಾಷ್ಟçಮಟ್ಟದಲ್ಲಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಎನ್.ಡಿ.ಎ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ರಾಜೇಂದ್ರ ಕೆ.ವಿ ಮತ್ತು ಕೀರ್ತನಾ ಬಿ.ಡಿ. ದಂಪತಿಗಳ ಸುಪುತ್ರ ಸಂಸ್ಥೆಯ ದ್ವಿತೀಯ ವಿಜ್ಞಾನ ವಿಭಾಗದ ಸರ್ವಜಿತ್ ಕೆ.ಆರ್. ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ವಿದ್ಯಾರ್ಥಿಗಳಿಂದ ನೆರವು :
ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ-೨೦೨೪ದಲ್ಲಿ, ಗಳಿಸಿದ ಆದಾಯದ ಒಂದು ಪಾಲನ್ನು ಸಮಾಜಮುಖಿ ಕಾರ್ಯಕ್ರಮಕ್ಕೆ ವಿನಿಯೋಗಿಸಬೇಕೆಂಬ ಡಾ.ಸುಧಾಕರ್ ಶೆಟ್ಟಿಯವರ ಆಶಯದಂತೆ, ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಾರ್ಷಿಕ ಕ್ರೀಡಾಕೂಟದ ಸಂದರ್ಭ ಆಯೋಜಿಸಿದ್ದ ‘ವ್ಯವಹಾರದಲ್ಲಿ ಕಲಿಕೆ ಮತ್ತು ಗಳಿಕೆ’ ಎಂಬ ವಿನೂತನ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಬಂದ ಲಾಭದಲ್ಲಿ ರೂ.೧೫ಸಾವಿರವನ್ನು ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಮಂಗಳಪಾದೆಯ ಮಂಜುನಾಥ್ ದೇವಾಡಿಗ ಹಾಗೂ ಪ್ರಮಿಳಾ ದೇವಾಡಿಗ ದಂಪತಿಯ ಮಗನಾದ ೧೪ ವರ್ಷಪ್ರಾಯದ ಚರಣ್ ಇವರಿಗೆ ಮುಖ್ಯ ಅತಿಥಿಗಳಿಂದ ಹೆತ್ತವವರ ಮೂಲಕ ಹಸ್ತಾಂತರಿಸಿಲಾಯಿತು.
ಜ್ಞಾನಸುಧಾ ಪತ್ರಿಕೆ-೩೮ ಬಿಡುಗಡೆ : ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ತ್ರೆöÊಮಾಸಿಕ ಪತ್ರಿಕೆಯಾದ ಜ್ಞಾನಸುಧಾ ಪತ್ರಿಕೆ – ೩೮ನ್ನು ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಯಿತು.
ಕಾಲೇಜಿನ ವಾರ್ಷಿಕ ವರದಿಯನ್ನು ರಸಾಯನ ಶಾಸ್ತç ವಿಭಾಗದ ಮುಖ್ಯಸ್ಥ ಡಾ.ಪ್ರಜ್ವಲ್ ಕುಲಾಲ್, ವಿದ್ಯಾರ್ಥಿಗಳ ಸಾಂಸ್ಕೃತಿಕ ಸಾಧನೆಯ ಪಟ್ಟಿಯನ್ನು ಭೌತಶಾಸ್ತç ಉಪನ್ಯಾಸಕ ಚಂದ್ರಕಾAತ್, ಕ್ರೀಡಾಸಾಧಕರ ಪಟ್ಟಿಯನ್ನು ದೈ.ಶಿ.ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ವಾಚಿಸಿದರು.
ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ, ಉಷಾ ರಾವ್ ಯು, ವಿದ್ಯಾರ್ಥಿ ನಾಯಕರಾದ ಮಯೂರ್ ಎಂ. ಗೌಡ ಮತ್ತು ಅನನ್ಯ ವಿ.ಶೆಟ್ಟಿ ಹಾಗೂ ವೇದಿಕೆಯ ಕೆಳಭಾಗದಲ್ಲಿ ಟ್ರಸ್ಟಿ ನಿತ್ಯಾನಂದ ಪ್ರಭು, ಕೌನ್ಸಿಲರ್ ಡಾ.ಪ್ರಸನ್ನ ಹೆಗ್ಡೆ, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಗ್ರಾಮಪಂಚಾಯತ್ ಸದಸ್ಯರಾದ ರಹಮತ್ ಉಲ್ಲಾ ಹಿತೈಷಿಗಳಾದ ತ್ರಿವಿಕ್ರಮ ಕಿಣಿ, ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿಹಣಾಧಿಕಾರಿ ಶ್ರೀ ದಿನೇಶ್ ಎಂ.ಕೊಡವೂರ್ ಸ್ವಾಗತಿಸಿ, ಆಂಗ್ಲಭಾಷಾ ಉಪನ್ಯಾಸಕಿ ಕು.ದರ್ಶಿನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಕಳ ಜ್ಞಾನಸುಧಾ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಜ್ಞಾನ ಸಂಭ್ರಮ
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಜ್ಞಾನ ಸಂಭ್ರಮವನ್ನು ಆಚರಿಸಲಾಯಿತು. ವಾರ
READ MORE
ಉಡುಪಿ ಜ್ಞಾನಸುಧಾ ಮತ್ತು ಮಣಿಪಾಲ ಜ್ಞಾನಸುಧಾ ಜಂಟಿ ಕಾಲೇಜು ವಾರ್ಷಿಕೋತ್ಸವ
ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿಯೂ ಗಣನೀಯವಾಗಿ ಸಾಧನೆಗೈಯಲು ಪ್ರೋತ್ಸಾಹ ನೀಡುತ್ತಾ ಈಗಾಗಲೇ ಉಡುಪಿ
READ MORE
ಮಣಿಪಾಲ ಜ್ಞಾನಸುಧಾ : ವಾಣಿಜ್ಯ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ
ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ
READ MORE
ಕಾರ್ಕಳ ಜ್ಞಾನಸುಧಾ : ೭೬ನೇ ಗಣರಾಜ್ಯೋತ್ಸವ ಸಂಭ್ರಮ
ಭವ್ಯ ಭಾರತವನ್ನು ಕಟ್ಟಿ ಧನ್ಯತೆಯನ್ನು ಪಡೆಯಬೇಕು - ಪದ್ಮಪ್ರಸಾದ್ ಜೈನ್ ನೆಲ್ಲಿಕಾರು ಕಾರ್ಕಳ : ಧರ್ಮವನ್ನು ಮೀರಿದ ರಾಷ್ಟಿçÃಯ ಹಬ್
READ MORE
ಯಕ್ಷೋತ್ಕರ್ಷದಿಂದ ಏಕಾದಶಿ ಕ್ಷೇತ್ರ ಮಹತ್ಮೆ
ಕಾರ್ಕಳ ಜ್ಞಾನಸುಧಾ ಆವರಣದಲ್ಲಿ ಸುಸಜ್ಜಿತ ರಂಗಮAಟದಲ್ಲಿ ಯಕ್ಷಗಾನ ತರಬೇತುದಾರ ಶ್ರೀ ಆನಂದ್ ಗುಡಿಗಾರ್ ಕೆರ್ವಾಶೆ ಇವರ ನಿರ್ದೇಶನದ
READ MORE
ಮಣಿಪಾಲ ಜ್ಞಾನಸುಧಾ : ಗಣಕ ವಿಜ್ಞಾನ ಉಪನ್ಯಾಸಕರ ಕಾರ್ಯಾಗಾರ
ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾ
READ MORE
ಜ್ಞಾನಸುಧಾದ 47 ಜೆ ಇ.ಇ ಮೈನ್ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ 3.075 ಲಕ್ಷ ರೂಪಾಯಿ ಪ್ರೋತ್ಸಾಹ ಧನ ವಿತರಣೆ
ನಾಲ್ವರು ವಿದ್ಯಾರ್ಥಿಗಳಿಗೆ ತಲಾ ೫೦ ಸಾವಿರ ರೂಪಾಯಿ ನಗದು ಪುರಸ್ಕಾರ ಕಾರ್ಕಳ: ತಂದೆ-ತಾಯಿ-ಗುರುಗಳಿಗೆ ವಂದಿಸಿ ಪಡೆದ ವಿದ್ಯೆಯು ವಿದ
READ MORE
ಕಾರ್ಕಳ ಜ್ಞಾನಸುಧಾ : ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ
ಗಣಿತನಗರ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಮು
READ MORE